Thursday 13 November 2014

ಮೂಡಣ ದಿಕ್ಕಿಗೆ ರಮ್ಯ ರಮಣೀಯ ಪರ್ವತ ಶ್ರೇಣಿ.. ಪಡುವಣದಲ್ಲಿ ಭಾರೀ ಕಡಲು ಮಧ್ಯದಲ್ಲಿ ವಿಶಿಷ್ಟ ಪ್ರದೇಶಗಳು, ಕಲೆ, ಸಂಸ್ಕ್ರತಿ, ಆಚಾರ ವಿಚಾರ, ಭಾಷೆ, ಆಹಾರ, ದೈವಿಕ ಕ್ಷೇತ್ರಗಳು, ಧರ್ಮಗಳು, ನದಿಗಳು, ಹಚ್ಚಹಸಿರನ್ನೊಳಗೊಂಡ ಪ್ರದೇಶ ನಮ್ಮ ಕುಂದಾಪುರ. ಈ ಕುಂದಾಪುರದ ಮಕ್ಕಳಾದ ನಮ್ಮದೇ ಆದ ಒಂದು ಸಮುದಾಯ ಈ "ಕುಂದಾಪುರ ಹುಡುಗಾ".
ಕ್ರಿಸ್ತ ಶಕ 2007 ರ ಮಾರ್ಚ್ 2 ರಂದು ಕೆಲವೇ ಕೆಲವು ಕುಂದಾಪುರದವರೊಂದಿಗೆ ಪ್ರಾರಂಭಗೊಂಡ ಒಂದು ಚಿಕ್ಕ ಗ್ರೂಪ್ ಓರ್ಕುಟ್ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಅಂಬೆಗಾಲಿಕ್ಕುತ್ತ ಸಾಗುತ್ತಾ ಬಂದು 2009 ರಲ್ಲಿ ಜನಬೆಂಬಲವನ್ನು ಪಡೆದುಕೊಂಡಿತು ... ಈ ಹೊತ್ತಿಗಾಗಲೆ ಕುಂದಾಪುರ ಹುಡುಗಾ ಎಲ್ಲರ ಮನೆ ಮಾತಾಗಿ ಹೊದದ್ದಂತು ನಿಜ ... ಇತ್ತೀಚೆಗೆ ಫೇಸ್ ಬುಕ್ ನಾಗಾಲೋಟದ ಕುದುರೆಯೊಂದಿಗೆ ಸರಿ ಸಮನಾಗಿ ಓಡಲಾಗದ ಓರ್ಕುಟ್ ಸ್ಥಗಿತಗೊಂಡಿದ್ದಂತು ತಿಳಿದಿರುವ ವಿಚಾರ, ಏನೇ ಇರಲಿ ನಾವು ನಮ್ಮ ಕುಂದಾಪುರ ಹುಡುಗಾ ದ ಪಯಣವನ್ನ ಫೆಸ್ ಬುಕ್ ನೆಟ್ ವರ್ಕ್ ಗೆ ಬಹಳ ಮುಂಚೆಯೇ ವರ್ಗಾಯಿಸಿಕೊಂಡಿದ್ದೆವು.
ಈ ತಾಣದಲ್ಲಿ ನಾವು ಪ್ರಕಟಿಸಿದ ನಮ್ಮದೇ ಆದ ಆಹಾರ, ಕಲೆ, ಸಂಸ್ಕ್ರತಿ, ನಮ್ಮೂರು, ಹಾಸ್ಯಗಳು ಇತ್ಯಾದಿಗಳಿಗೆ ಸಂಬಂಧಿಸಿದ ನಿಮ್ಮದೇ ಫೋಟೋಗಳು, ವಿಡಿಯೋಗಳಿಗೆ ಅಪಾರ ಮೆಚ್ಚುಗೆಗಳನ್ನು ನೀಡಿ ನಿಮ್ಮ ಲೈಕ್ಸ್ ಮೂಲಕ ನಮ್ಮ & ನಿಮ್ಮ ಕುಂದಾಪುರ ಹುಡುಗಾ ಸಮುದಾಯವನ್ನು ಬೆಂಬಲಿಸಿದ ನಿಮ್ಮೆಲ್ಲರಿಗೂ ನಿಮ್ಮವರೇ ಆದ ನಮ್ಮ ಅನಂತಾಂತ ಧನ್ಯವಾದಗಳು.
ನೀವೇ ನೋಡುತ್ತಿರುವಂತೆ ಲೈಕ್ಸ್ ಈಗಾಗಲೇ 2000 ದಾಟಿರುವುದು ಸಂತಸದ & ಸಂಭ್ರಮದ ವಿಷಯ. ಹಾಗೆಯೇ ಮುಂದೂ ಕೂಡ ನೀವು ಕಳುಹಿಸುವ ಫೋಟೋಗಳು, ವಿಡಿಯೋಗಳು ನಿಮ್ಮ ಸಲಹೆ ಸೂಚನೆಗಳೊಂದಿಗೆ ನಮ್ಮ & ನಿಮ್ಮ ಈ ಸಮುದಾಯವನ್ನು ಕ್ರೀಯಾಶೀಲವಾಗಿ ಮುನ್ನಡೆಸುವ ಆಶಯ ನಮ್ಮದು. ನಮ್ಮ ಊರು, ನಮ್ಮ ಭಾಷೆ, ಆಚಾರ ವಿಚಾರ, ಆಹಾರ ಇತ್ಯಾದಿಗಳನ್ನು ಇನ್ನೂ ಹೆಚ್ಚು ಹೆಚ್ಚು ನಮ್ಮ ಕುಂದಾಪುರ ಹುಡುಗಾ ಸಮುದಾಯದಲ್ಲಿ ಪ್ರಕಟಿಸೋಣ, ಎಲ್ಲೆಡೆ, ಎಲ್ಲರಿಗೂ ಹಬ್ಬಿಸೋಣ ...

Thursday 13 February 2014

Joke - 2

ಕ್ರೇಜಿ ಗುಂಡ

ಮಾಸ್ಟ್ರ್ : ಗುಂಡ, ನಿನ್ನೆ ಮತ್ ಮೊನ್ನೆ ಯಾಕಾ ಶಾಲಿಗ್ ಬರ್ಲಿಲ್ಲಾ?

ಗುಂಡ : ಸರ್, ನನ್ ಹತ್ರ ಇದ್ದದ್ ಒಂದೆ ಚಡ್ಡಿ, ಮೊನ್ನೆ ಅದನ್ನ ಒಗ್ದ್ ಹಾಕ್ರ್,
         ಹಾಂಗಾಯ್ ಬರ್ಲಿಲ್ಲಾ

ಮಾಸ್ಟ್ರ್ : ಮತ್ತೆ ನಿನ್ನೆ?

ಗುಂಡ : ನಿನ್ನೆ ರೆಡಿ ಆಯಿ ಶಾಲಿಗೆ ನಿಮ್ ಮನಿ ಹತ್ರ ಬಪ್ಪಂಗೆ ನಿಮ್ ಚಡ್ಡಿ

         ಒಣುಕೆ ಹಾಕದ್ ತೋರ್ತ್, ಹಾಂಗೆ ನೀವು ಬತ್ತಿಲೆ ಅಂದೆಳಿ ನಾನ್ ವಾಪಸ್ ಹ್ವಾದಿ

Wednesday 12 February 2014

Joke - 1

ಒಂದ್ ಹೆಣ್ಣ್ ಮನಿ ಬಿಟ್ ಓಡಿ ಹೊಯ್ ಮೂರ್ ದಿನ ಆರ್ ಮೇಲ್ ವಾಪಸ್ ಬಂದಳ್ ಅಂಬ್ರ್...

 ಹೆಣ್ಣಿನ್ ಅಪ್ಪಂಗೆ ಬಯಂಕರ ಶಿಟ್ ಬಂದ್ ಕೇಂಡ ಅಂಬ್ರು

 "ಇನ್ನು ಏನ್ ಬಾಕಿ ಇತ್ತ್ ಅಂದೆಳಿ ಬಂದೆ ಇಲ್ಲಿಗೆ?"

ಹೆಣ್ಣ್ ಚೀಂಕ್ ಸ್ವರದಂಗೆ ಹೆಳ್ತ್ ಅಂಬ್ರು....
.
.
.
.

"ನೋಕಿಯ ಸಪುರ ಪಿನ್ charger"